Hosa Digantha Digital
ಹೊಸ ದಿಗಂತ ಡಿಜಿಟಲ್
ಜನಪ್ರಿಯ ಕನ್ನಡ ದಿನಪತ್ರಿಕೆ ಹೊಸ ದಿಗಂತದ ದೃಶ್ಯ-ಶ್ರಾವ್ಯ ಸ್ವರೂಪವೇ, ಹೊಸದಿಗಂತ ಡಿಜಿಟಲ್.
ಹೊಸದಿಗಂತ ಪತ್ರಿಕೆ ಶುರುವಾಗಿದ್ದು ೧೯೭೯ ರಲ್ಲಿ. ಅಂದಿನಿಂದ ಇಂದಿನವರೆಗೂ ಈ ೪೫ ವರ್ಷಗಳಲ್ಲಿ ಅದು ಸಾಗಿ ಬಂದಿರುವ ಹಾದಿಯದೇ ಒಂದು ಯಶೋಗಾಥೆ.
ಸಮರ್ಥ ಸಂಪಾದಕೀಯ ತಂಡ, ಸ್ಪಷ್ಟ ಚಿಂತನೆಗಳು, ಸದೃಢ ಜಾಲ, ಮತ್ತು ಅಚಲ ಸೈದ್ಧಾಂತಿಕ ನಿಲುವುಗಳಿಂದಾಗಿ ಈ ಪತ್ರಿಕೆಯು ಈಗಾಗಲೇ ರಾಜ್ಯದ ಅತ್ಯಂತ ಸ್ಥಿರ ಮತ್ತು ವಿಶಿಷ್ಟ ಪತ್ರಿಕೆಯೆಂದು ಗುರುತಿಸಿಕೊಂಡಿದೆ. ಭಾರತ ಮತ್ತು ಭಾರತೀಯತೆಯನ್ನು ಎದೆಯ ಕೇಂದ್ರದಲ್ಲಿಟ್ಟುಕೊಂಡೇ ವಸ್ತುನಿಷ್ಠ ಪತ್ರಿಕಾಧರ್ಮವನ್ನು ನಿಭಾಯಿಸುತ್ತಾ ಬಂದಿರುವುದು ಹೊಸದಿಗಂತದ ಹೆಗ್ಗಳಿಕೆ.
ಈ ಪತ್ರಿಕೆಯ ಯೂಟ್ಯೂಬ್ ರೂಪವೇ, ಹೊಸದಿಗಂತ ಡಿಜಿಟಲ್. ಹೊಸ ತಲೆಮಾರಿನ ಆಸಕ್ತಿಗೆ ಹೊಂದುವಂತೆ ಆಕರ್ಷಕವಾಗಿ ಮತ್ತು ಆಲೋಚನಾತ್ಮಕವಾಗಿ ನಮ್ಮ ದೇಶದ ಹಾಗೂ ಜಗತ್ತಿನ ಆಗುಹೋಗುಗಳು, ರಾಜಕಾರಣ, ನಮ್ಮ ಪುರಾಣಗಳು, ನಮ್ಮ ಇತಿಹಾಸ, ನಮ್ಮ ಸಾಮಾಜಿಕ ತಲ್ಲಣಗಳು, ನಮ್ಮ ಶಿಕ್ಷಣ – ಇವೇ ಮುಂತಾದ ವಿಷಯಗಳ ಬಗ್ಗೆ ವಿಡಿಯೋ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸಾರ ಮಾಡುವುದು ಹೊಸದಿಗಂತ ಡಿಜಿಟಲ್‌ನ ಕೆಲಸ. ಎಲ್ಲವೂ ಆಳವಾದ ವಿಶ್ಲೇಷಣೆಗಳಿಂದ, ಒಳನೋಟಗಳಿಂದ, ಹೊಸಹೊಸ ಹೊಳಹುಗಳಿಂದ ಕೂಡಿರುವಂತೆ ಮಾಡಬೇಕು ಅನ್ನುವುದು ನಮ್ಮ ನಿರಂತರ ಪ್ರಯತ್ನ. ಯಾವುದೇ ಇದಮಿತ್ಥಂ ಎಂಬ ತೀರ್ಮಾನವನ್ನು ಹೇಳದೆ ನೋಡುಗರನ್ನು ಚಿಂತನೆಗೆ ಹಚ್ಚಿ ಅವರು ತಾವಾಗೇ ಸತ್ಯವನ್ನು ಹುಡುಕಿಕೊಳ್ಳುವಂತೆ ಪ್ರೇರೇಪಿಸಬೇಕು ಅನ್ನುವುದು ನಮ್ಮ ಧ್ಯೇಯ.
ಮೂರು ವರ್ಷಗಳಾಗಿವೆ ಶುರುವಾಗಿ. ಇಷ್ಟು ಅವಧಿಯಲ್ಲೇ ಯೂಟ್ಯೂಬ್ ಎಂಬ ಮಾಯಾಲೋಕದಲ್ಲಿ ತನ್ನದೇ ಒಂದು ವಿಶಿಷ್ಟ ಸ್ಥಾನವನ್ನು ಗುರುತಿಸಿ ಅದನ್ನು ಗಳಿಸಿಕೊಂಡಿರುವುದು ಹೊಸದಿಗಂತ ಡಿಜಿಟಲ್‌ನ ಸಾಧನೆ.